ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು.

16707259_1466793963340588_1720819881247005258_o

ಹೌದು ಕಳೆದ ಮೂರು ವರ್ಷಗಳ ಹಿಂದಿನ ವರೆಗೂ ಫೆಬ್ರವರಿ-14ನ್ನು ನಮ್ಮ ಯುವ ಸಮೂಹ ಪ್ರೇಮಿಗಳ ದಿನವೆಂದು ಆಚರಿಸುತ್ತಿತ್ತು. ಆದರೆ ಯುವಾ ಬ್ರಿಗೇಡ್ ಮೂರು ವರ್ಷದ ಹಿಂದೆ ಆ ದಿನವನ್ನು ಸ್ವಲ್ಪ ಉಚ್ಛ್ರಾಯ ಮಟ್ಟಕ್ಕೆ ಕೊಂಡೊಯ್ದು ಇದು ಕೇವಲ ಇದು ಪ್ರೇಮಿಗಳ ದಿನವಲ್ಲ ದೇಶ ಪ್ರೇಮಿಗಳ ದಿನ ಎಂದು ಆಚರಿಸಿತು ಅದುವೇ #MyLoveMYNation. ಯೌವ್ವನ ಕೇವಲ ದೇಹ ಪ್ರೇಮಕ್ಕಲ್ಲ ದೇಶ ಪ್ರೇಮಕ್ಕೆಂದು ಹೇಳಿತು. ರೋಜ್ ಕೊಡುವುದು ಹುಡುಗ ಹುಡುಗಿಗಷ್ಟೇ ಅಲ್ಲ ಹುಡುಗಿ ಹುಡುಗನಿಗಷ್ಟೇ ಅಲ್ಲ ಬದಲಾಗಿ ಇಬ್ಬರು ಸೇರಿ ತಾಯಿ ಭಾರತಿಯ ಪಾದ ಪದ್ಮಗಳಿಗೆ ಅರ್ಪಿಸುವುದು ಎಂದು ಸಾರಿ ಹೇಳಿತು. ಯುವಾ ಬ್ರಿಗೇಡ್ ನ ಕಾರ್ಯಕ್ರಮ ನಾಡಿನ ಅನೇಕ ದೇಶ ಪ್ರೇಮಿ ಯುವಕರ ಮನ ಸೂರೆಗೊಂಡಿತು.

ಮೊದಲನೆ ವರ್ಷದ ಸ್ಫೂರ್ತಿಯಿಂದ ಎರಡನೇ ವರ್ಷಕ್ಕೂ ಕಾರ್ಯಕ್ರಮವನ್ನು ಮುಂದುವರೆಸಿದ ಯುವಾ ಬ್ರಿಗೇಡ್ #ಸ್ವಚ್ಛಪ್ರೇಮದ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಚರಿಸಲಾಯಿತು. ಪ್ರತಿನಿತ್ಯವೂ ನಮ್ಮ ಊರು, ನಾವು ಇರುವ ಪ್ರದೇಶ ಸ್ವಚ್ಛವಾಗಿರಲೆಂದು ಶ್ರಮಿಸುತ್ತಿರುವ ಸಫಾಯಿವಾಲಾಗಳು ಅರ್ಥಾತ್ ಪ್ರೀತಿಯ ಪೌರ ಕಾರ್ಮಿಕರ ಜೊತೆ ಅವರಿರುವ ಜಾಗ(ಸ್ಲಂ) ಗಳಿಗೆ ತೆರಳಿ ಅವರ ಪ್ರದೇಶವನ್ನು ಸ್ವಚ್ಛಗೊಳಿಸಿ ಅವರೆಲ್ಲರಿಗೂ ಸಿಹಿ ಹಂಚಿ, ಅವರಲ್ಲಿರುವ ಹಿರಿಯರನ್ನು ಗುರುತಿಸಿ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಈ ವರ್ಷ #MyLoveMYNationನ್ನು ಯುವಾ ಬ್ರಿಗೇಡ್ ಇನ್ನಷ್ಟು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಿತು ಅದು #ಹಿರಿಮನೆ ಹೆಸರಿನಲ್ಲಿ. ಪ್ರೀತಿಯಿಂದ ಬೆಳಿಸಿದ ತಂದೆ ತಾಯಿಗಳನ್ನು ಅವರ ಸಂಧ್ಯಾ ಕಾಲದಲ್ಲಿ ಮಕ್ಕಳಂತೆ ನೋಡಿಕೊಳ್ಳದೆ ದೂರ ಮಾಡಿ ವೃದ್ಧಾಶ್ರಮದಲ್ಲಿ ಬಿಟ್ಟು ಬಂದಿರುತ್ತಾರೆ. ಅಂತಹ ಹಿರಿಯ ಜೀವಿಗಳ ನೋವಿಗೆ ದನಿಯಾಗಿ, ಅವರೊಟ್ಟಿಗೆ ಅವರ ಮಕ್ಕಳಾಗಿ, ಅವರ ನೆಮ್ಮದಿಗೆ ಹಾಡಾಗುವ ಪ್ರಯತ್ನವನ್ನು ಯುವಾ ಬ್ರಿಗೇಡ್ ಮಾಡಿತು ಅದಕ್ಕೆ #ಹಿರಿಮನೆ ಎಂದು ಕರೆಯಿತು.

16711469_1640165189623016_2924923630345021042_n

ರಾಜ್ಯದ ಬೆಂಗಳೂರು, ಗದಗ, ಬಳ್ಳಾರಿ, ಮಂಗಳೂರು, ಶಿವಮೊಗ್ಗ, ಇನ್ನೂ ಅನೇಕ ಜಿಲ್ಲೆಗಳು ಹಾಗೂಹೊರ ರಾಜ್ಯವಾದ ಗೋವೆಯಲ್ಲೂ ಕೂಡ ಯುವಾ ಬ್ರಿಗೇಡ್ ಈ ಕಾರ್ಯಕ್ರಮವನ್ನು ಕೈಗೊಂಡಿತು.

16508971_1640165272956341_3452360930714528074_n16602156_1640164996289702_7540380322085404401_o16722422_1203098803142469_1766387104034434575_o

ಬೆಂಗಳೂರಿನ ಹಿರಿಮನೆಯೊಂದರಲ್ಲಿ ಎಲ್ಲ ಹಿರಿಯ ಜೀವಿಗಳೊಂದಿಗೆ ಬೆರೆತು ಅವರೊಟ್ಟಿಗೆ ಊಟ ಮಾಡಿದರೆ, ಬಳ್ಳಾರಿಯ ಹಿರಿಮನೆಗೆ ಭೇಟಿ ನೀಡಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಹಿರಿಯ ಜೀವಿಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿ ಅವರಿಗೆ ಶಕ್ತಿ ನೀಡುವ ಪ್ರೊಟೀನ್ ಯುಕ್ತ ಔಷಧಿಗಳನ್ನು ವಿತರಿಸಲಾಯಿತು. ಇನ್ನು ಗೋವೆಯಲ್ಲಿ ಈ ಹಿರಿಯ ಜೀವಗಳ ಜೊತೆ ಹಾಡು ಹರಟೆಗಳೊಂದಿಗೆ ಅವರೊಂದಿಗೆ ಮಕ್ಕಳಾಗಿ ಬೆರೆತು ಸಂಭ್ರಮಿಸಲಾಯಿತಿ.

16640931_1313729362055908_8073759359805493543_n

ಈ ಜಗತ್ತಿನಲ್ಲಿ ಹಿರಿಯರು ಮತ್ತು ಕಿರಿಯರು ಬಿಲ್ಲು ಬಾಣವಿದ್ದಂತೆ. ಅನುಭವದ ಗಣಿಗಳಂತಿರುವ ಹಿರಿಯರು ತಮ್ಮ ಅನುಭವದಿಂದ ಹಿಂದೆ ಎಳೆದು ಬಿಡುತ್ತಾರೋ ಕಿರಿಯರು ಅಷ್ಟು ವೇಗವಾಗಿ ಮುನ್ನುಗ್ಗುತ್ತಾರೆ. ಇದರಿಂದ ದೇಶ ಯಾವಾಗಲೂ ಸುಭಿಕ್ಷವಾಗಿರುತ್ತದೆ. ಇಂತಹ ಮನ ಮಿಡಿಯುವ ಕ್ಷಣಗಳಿಗೆ ಯುವಾ ಬ್ರಿಗೇಡ್ ಸಾಕ್ಷಿಯಾಯಿತು.

16938796_1323320844430093_2889283917305745448_n

ಈ ವೃದ್ಧಾಶ್ರಮಗಳ ಕಲ್ಪನೆಯೇ ಅತ್ಯಂತ ಅವಮಾನಕರ ಮತ್ತು ದುರುಂತ. ನಾವು ಯಾವತ್ತೂ ನಮ್ಮ ಹಿರಿಯರನ್ನು ಅವರ ಸಂಧ್ಯಾಕಾಲದಲ್ಲಿ ದೂರ ಮಾಡದೆ ಅವರನ್ನು ಪ್ರೀತಿಯಿಂದ ಮಕ್ಕಳಂತೆ ನೋಡಿಕೊಂಡರೆ ಇಂತಹ ವೃದ್ಧಾಶ್ರಮಗಳ ಅಗತ್ಯತೆಯೇ ಇರುವುದಿಲ್ಲ. ಆ ರೀತಿಯ ಸಂಕಲ್ಪ ಇಂದೇ ಮಾಡೋಣ. ಒಟ್ಟಿನಲ್ಲಿ ಈ ದೇಶ ವಿಶ್ವಗುರುವಾಗಬೇಕಾದರೆ ಇಂತಹ ಹಿರಿಯ ಜೀವಿಗಳ ಆಶೀರ್ವಾದ ಇರಬೇಕೆಂದು ಅವರ ಆಶೀರ್ವಾದವನ್ನು ಪಡೆದು ಅವರೊಟ್ಟಿಗೆ ನಾವು ಸದಾ ಇರುತ್ತೇವೆಂದು ಭರವಸೆ ನೀಡಿ ಸಾರ್ಥಕ ಭಾವದಿಂದ ಬಂದೆವು.