ತಿಂಗಳಿಗೊಂದು ಕಾರ್ಯಕ್ರಮ, ಕೆಲವೊಮ್ಮೆ ಎರಡು. ಸಾವಿರಾರು ಜನರ ಸಹಯೋಗ, ಲಕ್ಷಾಂತರ ಜನರಿಗೆ ಉಪಯೋಗ. ಯುವಾ ಬ್ರಿಗೇಡ್ ವಿಸ್ತಾರವಾಗುತ್ತಿದೆ.

ಪ್ರತೀ ದಿನ, ಪ್ರತೀ ಸಂಗತಿ ಪ್ರೇರಣಾದಾಯಿಯೇ ಇದನ್ನು ಎಲ್ಲರಿಗೂ ಮುಟ್ಟಿಸಲು ಸದ್ಯಕ್ಕೆ ಇರುವ ಮಾರ್ಗ ಫೇಸ್ ಬುಕ್ ಮಾತ್ರ. ಫೇಸ್ ಬುಕ್ನ ವರದಿಗಳು ಹರಿದು ಹಂಚಿಹೋಗಿರುವಂಥದ್ದು. ಅದನ್ನು ವರದಿಯ ರೂಪದಲ್ಲಿ ಸಂಕಲಿಸಿ ಒಂದೆಡೆ ಜೋಡಿಸಿ ಉಣಬಡಿಸುವ ಪ್ರಯತ್ನದ ನ್ಯೂಸ್ಲೆಟರ್ YB ಆಟೋಗ್ರಾಫ್!

ಆಟೋಗ್ರಾಫ್ ಅನ್ನೋದು ಸಂದೇಶ,ಹಸ್ತಾಕ್ಷರಗಳ ಗುಚ್ಛ. ಈ ಆಟೋಗ್ರಾಫ್ ಅಕ್ಷರಶಃ ವವೈಬ್ ಸಂದೇಶವಾಹಕವೇ. ಹೊಸ ಜನರನ್ನು ಮುಟ್ಟುವ ಭಾವನೆಗಳ ಮೂಲಕ ಅವರನ್ನು ತಟ್ಟುವ ವಿಶೇಷ ಪ್ರಯತ್ನ ಈ ಮೂಲಕ ಮಾಡಲಾಗುತ್ತಿದೆ.

ಇನ್ನು ಮುಂದೆ ಯುವಾ ಬ್ರಿಗೇಡ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರಿಗೂ ಆಟೋಗ್ರಾಫ್ ಸಿಗಲಿದೆ.ನಿರಂತರ ವರದಿಗಳ ಮಹಾಪೂರ ಸಮಾಜಕ್ಕೆ ತಲುಪಲಿದೆ.

ಜೊತೆಯಲ್ಲಿರಿ,

ವಂದೇ,

chakravarti_sulibele-dp
ಚಕ್ರವರ್ತಿ ಸೂಲಿಬೆಲೆ