ಯುವಾ ಬ್ರಿಗೇಡ್ ಕಾಸರಗೋಡು ಜಿಲ್ಲಾ ವತಿಯಿಂದ ನಡೆಸಲಾದ ಕಾರ್ಯಕ್ರಮದ ವಿವರ :

ಆಗಸ್ಟ್ ತಿಂಗಳ ಕಾರ್ಯಕ್ರಮ :

IMG_20160928_094630_845

ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಉಪ್ಪಳ ಕೊಂಡೆವೂರು ದಿನಾಂಕ 15-08-2016ರಂದು ಶ್ರೀ ಶ್ರೀ ಪರಮಪೂಜ್ಯ ಯೋಗಾನಂದ ಸರಸ್ವತಿ ಶ್ರೀಗಳ ಉಪಸ್ಥಿತಿಯೊಂದಿಗೆ ವಿಧ್ಯಾಪೀಠದ ಮಕ್ಕಳಿಗಾಗಿ ಸ್ವಾತಂತ್ರ್ಯವೀರ ದಾಮೋದರ ಸಾವರ್ಕರ್ ವೀಡಿಯೋ, ಕಾರ್ಗಿಲ್ ಯುದ್ಧಕದನ ಕುರಿತಾದ #ನಮನ್ ಹಾಗೂ ತಾತ್ಯಾ200 ವೀಡಿಯೋ ಪ್ರದರ್ಶಿಸಲಾಯಿತು. ಯೋಗಗುರುಗಳಾದ ಪುಂಡರಿಕಾಕ್ಷ ಬೆಳ್ಳೂರು ಅವರು ರಾಷ್ಟ್ರದ ಸೇವೆಯಲ್ಲಿ ಮಕ್ಕಳು ತಮ್ಮ ಜೀವನದಲ್ಲಿ ಆದರ್ಶವಾಗಿ ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಇಟ್ಟುಕೊಂಡು, ಅವರ ಜೀವನಕಥೆಗಳನ್ನು ಮಾದರಿಯಾಗಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು. ಮಕ್ಕಳಿಗಾಗಿ ದೇಶಭಕ್ತಿಗೀತೆ ಪ್ರಬಂಧದ ರಚನೆ ಹಾಗೂ ವಿಜೇತರಾದವರಿಗೆ ಯುವಾಬ್ರಿಗೇಡ್ ವತಿಯಿಂದ ಪುಸ್ತಕ ವಿತರಣೆ ನಡೆಯಿತು.ಯುವಾ ಬ್ರಿಗೇಡ್ ಕಾಸರಗೋಡು ಜಿಲ್ಲಾ ಸಂಚಾಲಕರಾದ ಕೃಷ್ಣಪ್ರಸಾದ್ ಜಿ.ಕಾಟುಕುಕ್ಕೆ ಇವರು ಯುವಾ ಬ್ರಿಗೇಡಿನ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಗೂ ಶ್ರೀಗಳಿಂದ ಆಶೀರ್ವಚನ ನೆರವೇರಿತು.

IMG_20160928_094630_883
IMG_20160928_094630_908
IMG_20160928_094631_58

ದಿನಾಂಕ 15-08-2016 ಧರ್ಮತ್ತಡ್ಕ ಶಾಲೆಯಲ್ಲಿ ಎಲ್ಲಾ ವಿಧ್ಯಾರ್ಥಿ ಹಾಗೂ ಅಧ್ಯಾಪಕರ ಉಪಸ್ಥಿತಿಯೊಂದಿಗೆ ಮಕ್ಕಳಿಗೆ ಸ್ವಾತಂತ್ರ್ಯವೀರ ದಾಮೋದರ ಸಾವರ್ಕರ್ ವೀಡಿಯೋ ಪ್ರದರ್ಶನ,ತಾತ್ಯಾ200 ವೀಡಿಯೋ ಹಾಗೂ #ನಮನ್ ವೀಡಿಯೋ ಪ್ರದರ್ಶನ ನೆರವೇರಿತು.ಶಾಲಾ ಮುಖ್ಯೋಪಾಧ್ಯಯರು ಯುವಾಬ್ರಿಗೇಡಿನ ಈ ಕಾರ್ಯವನ್ನು ಮುಕ್ತವಾಗಿ ಪ್ರಶಂಸಿಸಿ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಕಾರ್ಯಕ್ರಮ ತಲುಪಿಸಿ ಎಂಬ ಸಂದೇಶವನ್ನು ಕೊಟ್ಟರು.
02-08-16 ಸ್ವರ್ಗ ವಿವೇಕಾನಂದ ಶಾಲೆಯಲ್ಲಿ ಎಲ್ಲಾ ವಿಧ್ಯಾರ್ಥಿ ಹಾಗೂ ಅಧ್ಯಾಪಕರ ಉಪಸ್ಥಿತಿಯೊಂದಿಗೆ ಮಕ್ಕಳಿಗೆ ಸ್ವಾತಂತ್ರ್ಯವೀರ ದಾಮೋದರ ಸಾವರ್ಕರ್ ವೀಡಿಯೋ ಪ್ರದರ್ಶನ,ತಾತ್ಯಾ200 ವೀಡಿಯೋ ಹಾಗೂ #ನಮನ್ ವೀಡಿಯೋ ಪ್ರದರ್ಶನ ನೆರವೇರಿತು.ಶಾಲಾ ಮುಖ್ಯೋಪಾಧ್ಯಯರು ಕಿರು ಸ್ಮರಣಿಕೆಯೊಂದಿಗೆ ಯುವಾಬ್ರಿಗೇಡಿನ ಕಾರ್ಯಕರ್ತರನ್ನು ಬೀಳ್ಕೋಟ್ಟರು.
26-08-2016 ಕಾಟುಕುಕ್ಕೆ ಭಾಲಪ್ರಭಾ ಶಾಲೆಯಲ್ಲಿ ಮಕ್ಕಳಿಗಾಗಿ ಸ್ವಾತಂತ್ರ್ಯವೀರ ದಾಮೋದರ ಸಾವರ್ಕರ್ ವೀಡಿಯೋ ಪ್ರದರ್ಶನ,ತಾತ್ಯಾ200 ವೀಡಿಯೋ ಹಾಗೂ #ನಮನ್ ವೀಡಿಯೋ ಪ್ರದರ್ಶನ  ಹಾಗೂ ಮಕ್ಕಳಿಗಾಗಿ ಕ್ವಿಝ್ ಏರ್ಪಡಿಸಲಾಯಿತು.ಶಾಲಾ ಅಧ್ಯಾಪಕ ವೃಂದ ಸಂಪೂರ್ಣ ಸಹಕಾರ ನೀಡಿ ಇನ್ನು ಮುಂದೆಯೂ ಇಂತಹ ಕಾರ್ಯಕ್ರಮವನ್ನು ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು.