ಜನವರಿ 23 ಸುಭಾಷ್ ಚಂದ್ರ ಬೋಸರ ಜಯಂತಿ. ಭಾರತ ಮಾತೆಯ ಶ್ರೇಷ್ಠ ಪುತ್ರ ಸುಭಾಷ್ ಚಂದ್ರ ಬೋಸರ ಬಗ್ಗೆ ತಿಳಿಸುವುದು ಮತ್ತು ಅವರ ಸಂದೇಶವನ್ನು ಮನೆ-ಮನೆಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ.

ಈ ಕಾರಣಕ್ಕಾಗಿಯೇ ಯುವಾಬ್ರಿಗೇಡ್ ಈ ಬಾರಿ ಜನವರಿ 23 ರಂದು ಸುಭಾಷ್ ಚಂದ್ರ ಬೋಸರ ಕೆಲವು ಆಯ್ದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿತು. ಪ್ರತಿಯೊಂದು ರಾಷ್ಟ್ರಭಕ್ತಿಯನ್ನು ಉಕ್ಕಿಸುವ ಬೆಂಕಿಯ ಉಂಡೆಯೇ!

#BoseQuotes ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಯ್ತು. ಹಲವರು ಈ ಸಂದೇಶಗಳನ್ನು ಈಗಲೂ ಬೇರೆ-ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಾರೆ. ಯುವಾಬ್ರಿಗೇಡ್ ನ ಈ ಯೋಜನೆಗೆ ಅತ್ಯುತ್ತಮ‌ ಪ್ರತಿಕ್ರಿಯೆ ದೊರೆಯಿತು.