ಯುವಾ ಬ್ರಿಗೇಡ್ ಕರ್ನಾಟಕದಾದ್ಯಂತ ಸುಮಾರು 150  ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದೆ. ಜಲ ಮತ್ತು ಜನರ ನಡುವೆ ಸಂಪರ್ಕವನ್ನು ಕಲ್ಪಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನದಲ್ಲಿ ಒಂದು ಹೆಜ್ಜೆ ಮುಂದೆ ಸಾಗಿ ನದಿಗಳ ಸ್ವಚ್ಛತೆಯನ್ನು ಮಾಡಲು ಪ್ರಾರಂಭಿಸಿತು.

ಪಯಸ್ವಿನಿ ಸುಳ್ಯದಲ್ಲಿರುವ ನದಿ. ಮನೆಯ, ದೇವಾಲಯದ, ಸುತ್ತ-ಮುತ್ತ ಊರಿನ ಮತ್ತು ನದಿಗಳನ್ನು ನೋಡಿ ಸಂತೋಷ ಪಡಲೆಂದೇ ಬರುವ ಜನ ಆಕೆಯನ್ನು ಗಲೀಜು ಮಾಡಿ‌ ಹಿಂದಿರುಗುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗಾಗಿಯೇ ಗಲೀಜಾಗಿದ್ದು ಸುಳ್ಯದ ಪಯಸ್ವಿನಿ! ಆಕೆಯನ್ನು ಸ್ವಚ್ಛಗೊಳಿಸುವ ಯೋಜನೆಯನ್ನು ಯುವಾ ಬ್ರಿಗೇಡ್ ಕೈಗೊಂಡಿತು.

ಏಪ್ರಿಲ್ ನಲ್ಲಿ ಸುಮಾರು 15 ಕಾರ್ಯಕರ್ತರು ದಿನವಿಡೀ ಕೆಲಸ ಮಾಡಿ 2 ಟನ್ ನಷ್ಟು ಕಸವನ್ನು ತೆಗೆದುಹಾಕಿದರು.