ತೃಪ್ತಿ ಅನ್ನೋದು ಇತರರ ಮುಖದಲ್ಲಿ ಮಿನುಗುವ ಮಂದಹಾಸದಲ್ಲಿದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಯುವಾ ಬ್ರಿಗೇಡ್ ಈ ಬಾರಿ ಸೇನಕ್ಕೆ ಸೇರಬೇಕೆನ್ನುವ ಆಸಕ್ತ ಯುವಕರಿಗೆ ತರಬೇತಿ ನೀಡುವ ಸಾಹಸಕ್ಕೆ ಕೈ ಹಾಕಿತು.

ಇದರಂತೆ ಮೂರು ಕಡೆಗಳಲ್ಲಿ ಕಾರ್ಯಾಗಾರ ನಡೆಯಿತು. ಇದರಲ್ಲಿ ಸುಮಾರು 350 ತರುಣರು ಭಾಗವಹಿಸಿ ಪೂರ್ಣ ಪ್ರಮಾಣದ ದೈಹಿಕ, ಮಾನಸಿಕ, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರು. ಅವರಲ್ಲಿ ಬಹುತೇಕರಿಗೆ ದುಡ್ಡು ನೀಡಿ ತರಬೇತಿ ಪಡೆಯುವ ಶಕ್ತಿಯೇ ಇರಲಿಲ್ಲ. ಯುವಾ ಬ್ರಿಗೇಡ್ ನ‌ ಈ ಪ್ರಯತ್ನದಿಂದ ಅವರೆಲ್ಲಾ ಸೈನ್ಯಕ್ಕೆ ಸೇರುವಲ್ಲಿ ಹತ್ತಿರ ಬಂದಿದ್ದಾರೆ.

ಸುಮಾರು 36 ಅಭ್ಯರ್ಥಿಗಳು ಅದಾಗಲೇ ಸೇನೆಗೆ ಆಯ್ಕೆಯಾಗಿದ್ದಾರೆ ಎನ್ನುವುದು ಯುವಾ ಬ್ರಿಗೇಡ್ ನ ಹೆಮ್ಮೆಯ ಸಂಗತಿ.