ಪ್ರತೀ ಬಾರಿ ಪರೀಕ್ಷೆ ಮುಗಿದೊಡನೆ ನಮ್ಮ‌ ನೋಟ್ ಬುಕ್ ಗಳನ್ನು ಬಿಸಾಡಿಬಿಡುತ್ತೇವೆ. ಹಾಗೆ ಬಿಸಾಡುವಾಗ ಬರೆಯದೇ ಖಾಲಿ ಇರುವ ಹಾಳೆಗಳೂ ರದ್ದಿಪಾಲಾಗಿಬಿಡುತ್ತವೆ.

ಪ್ರತೀ ಬಾರಿ ಹಾಳೆ ತಯಾರಿಸಲೂ ಅನೇಕ ವೃಕ್ಷಗಳು ಬಲಿಯಾಗುತ್ತವೆ. ಲಕ್ಷಾಂತರ ವಿದ್ಯಾರ್ಥಿಗಳು ಅಧ್ಯಯನಕ್ಕೆ ನೋಟ್ ಬುಕ್ ಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ. ಹಾಗಾಗಿ ಯುವಾಬ್ರಿಗೇಡ್ ಈ ಬಾರಿ ಅವರ ಸಹಾಯಕ್ಕೆ ಜೊತೆಯಾಗಲು ನಿರ್ಧರಿಸಿತು.

ಈ ಯೋಜನೆಯಡಿಯಲ್ಲಿ ಪರೀಕ್ಷೆಗೂ ಮುನ್ನ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಈ ವಿಚಾರವನ್ನು ಮುಟ್ಟಿಸಲಾಯಿತು. ಪರೀಕ್ಷೆಯ ಕೊನೆಯ ದಿನ ಅವರಿಂದ ಬರೆಯದೇ ಉಳಿದ ಹಾಳೆಗಳನ್ನು ಸಂಗ್ರಹಿಸಲಾಯಿತು. 50 ಅಥವಾ 100 ಹಾಳೆಗಳನ್ನು ಜೋಡಿಸಿ ಅದನ್ನು ಸುಂದರ ಪುಸ್ತಕಗಳನ್ನಾಗಿ ಮಾಡಲಾಯ್ತು. ಪುಸ್ತಕದ ಮುಖಪುಟಕ್ಕೆ ಸ್ವಾತಂತ್ರ್ಯ ಹೋರಾಟಗಾರರ, ಆದರ್ಶ ವ್ಯಕ್ತಿಗಳ ಚಿತ್ರಪಟವನ್ನು ಹಾಕಲಾಯ್ತು. ಕರ್ನಾಟಕದಾದ್ಯಂತ ನೋಟ್ ಪ್ಯಾಡ್ ಮ್ಯಾನ್ ಅತ್ಯಂತ ಯಶಸ್ವಿಯಾಗಿ ನೆರವೇರಿತು.