ನಂಜನಗೂಡಿನಲ್ಲಿ ಹರಿಯುವ ನದಿ‌ ಕಪಿಲೆ. ಭಕ್ತರು ಆಕೆಯನ್ನು ಭಕ್ತಿಯಿಂದ ಕಾಣುತ್ತಾರೆ.‌ ಆದರೆ ಆಕೆಯ ಸ್ವಚ್ಛತೆಯನ್ನು ಕಾಪಾಡುವುದಿಲ್ಲ.

ಹೀಗಾಗಿಯೇ ಯುವಾಬ್ರಿಗೇಡ್ ಕಾರ್ಯಕರ್ತರು ಕಪಿಲೆಯನ್ನು ಸ್ವಚ್ಛಗೊಳಿಸಲು ಮುಂದಾದರು. ಸುಮಾರು 30 ಜನ ಕಾರ್ಯಕರ್ತರು ಒಂದು ಭಾನುವಾರವಿಡೀ ಕೆಲಸ ಮಾಡಿ 15 ಟನ್ ಕಸವನ್ನು ಹೊರತೆಗೆದರು.