ಈ ಬಾರಿ ಯುವಾಬ್ರಿಗೇಡ್ ನನ್ನ ಕನಸಿನ ಕರ್ನಾಟಕ ಎಂಬ ಯೋಜನೆಯನ್ನು ಕೈಗೆತ್ತಿಕೊಂಡು ಕರ್ನಾಟಕವನ್ನು ಸುಂದರವಾಗಿಸುವ ಪ್ರಯತ್ನಕ್ಕೆ ಕೈ ಹಾಕಿತು. ನಮ್ಮ ಊರು, ಹಳ್ಳಿ, ಜಿಲ್ಲೆ, ರಾಜ್ಯದ ಕುರಿತಂತೆ ನಮ್ಮ-ನಮ್ಮ ಕನಸುಗಳನ್ನು ಹಂಚಿಕೊಳ್ಳುವ ಸಾಧ್ಯವಾದರೆ ಸಾಕಾರಗೊಳಿಸಿಕೊಳ್ಳುವ ಪ್ರಯತ್ನವನ್ನು ಯುವಾಬ್ರಿಗೇಡ್ ಮಾಡಿತು.

ನವೆಂಬರ್ 1 ಕನ್ನಡ ರಾಜ್ಯೋತ್ಸವ. ಕರ್ನಾಟಕದ ಕುರಿತ ತಮ್ಮ ಕನಸುಗಳನ್ನು ಹಂಚಿಕೊಳ್ಳಬೇಕೆಂದು ಯುವಾಬ್ರಿಗೇಡ್ ಅಂದು ನನ್ನ ಕನಸಿನ ಕರ್ನಾಟಕ ಟ್ವಿಟರ್ ಟ್ರೆಂಡ್ ಮಾಡಲು ನಿರ್ಧರಿಸಿತು. ಕೇವಲ ಹೊರ ರಾಜ್ಯದ ಕನ್ನಡಿಗರಷ್ಟೇ ಅಲ್ಲದೇ, ಹೊರ ದೇಶದಲ್ಲಿರುವ ಕನ್ನಡಿಗರೂ ಇದರಲ್ಲಿ ಕೈ ಜೋಡಿಸಿದರು. ಭಾರತದಲ್ಲಿ ನನ್ನ ಕನಸಿನ ಕರ್ನಾಟಕ ಟಾಪ್ ಟ್ರೆಂಡ್ ಗೆ ಹೋಗಿ ದೇಶದ ಜನರೆಲ್ಲ ಒಮ್ಮೆ ನಮ್ಮ ಕನಸುಗಳನ್ನು ನೋಡುವಂತಾಯಿತು.