ಆಕಾಶ ದೀಪ

#ಮೇಜರ್_ಸಂದೀಪ್_ಉನ್ನಿಕೃಷ್ಣನ್_ಹುಟ್ಟುಹಬ್ಬ

ಮಾರ್ಚ್ 15 ಅಂದ ಕೂಡಲೇ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಇವರಿಗೆ ನೆನಪಾಗೊದೊಂದೇ ಮೇಜರ್ ಸಂದೀಪರ ಹುಟ್ಟು ಹಬ್ಬ

ಪ್ರತಿ ವರ್ಷದಂತೆ ಈ ವರ್ಷವೂ ಸಂದೀಪರ ಮನೆಯಲ್ಲಿ ಹುಟ್ಟು ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಯಿತು.

ಬೆಳಗ್ಗೆ ಇಂದಲೇ ಸಡಗರ ಮನೆ ಮಾಡಿತ್ತು. ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಮೊದಲ್ಗೊಂಡು, ಆನಂತರದಲ್ಲಿ ಮಕ್ಕಳಿಗೆ ದೇಶಭಕ್ತಿ ಗೀತೆಗಳನ್ನು ಹೇಳಿಕೊಟ್ಟಿದ್ದು ನಮ್ಮ ಶ್ರೀ ನಿತ್ಯಾನಂದ ವಿವೇಕವಂಶಿ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರೀಯರು. ಮಕ್ಕಳೆಲ್ಲರನ್ನೂ ಶಿಸ್ತಿನಲ್ಲಿ ಸಂದೀಪರ ನೆನಪಿನಲ್ಲಿ ಕಟ್ಟಲಾದ ಸಂದೀಪ್ ಮೆಮೋರಿಯಲ್ ಅನ್ನು ತೋರಿಸಿದ್ದು ಯುವಾ ಬ್ರಿಗೇಡ್

ಸಂದೀಪ್ ಮೆಮೋರಿಯಲ್ ಎನ್ನುವದು ಒಂದು ಸುಂದರವಾದ ಕೊಠಡಿ ಅನ್ನುವುದಕ್ಕಿಂತಲೂ ಹೆಚ್ಚಾಗಿ ಅದು ಒಂದು ಅರಮನೆ. ತಮ್ಮ ಮಗನ ಹುಟ್ಟಿನಿಂದಲೂ ಇಲ್ಲಿಯವರೆಗೆ ಬಳಸುತ್ತಿದ್ದ ದೈನಂದಿನ ಬಳಕೆಯ ವಸ್ತುಗಳನ್ನು ಅಲಂಕೃತವಾಗಿ ಜೋಪಾನವಾಗಿ ಜೋಡಿಸಿಟ್ಟಿದ್ದಾರೆ ಅಪ್ಪ ಅಮ್ಮ..

ಮಧ್ಯಾನದ ಊಟ ಮುಗಿಸಿಕೊಂಡು ಮಕ್ಕಳು ಶಾಲೆಯತ್ತ ಮುಖ ಮಾಡಿದರು.

ನಮ್ಮ ಕಾರ್ಯಕ್ರಮವು ಇಳಿ ಸಂಜೆಯಲ್ಲಿ ದೇಶಭಕ್ತರ ಸಮ್ಮುಖದಲ್ಲಿ ಮಳೆಯ ಆರ್ಭಟದೊಂದಿಗೆ ಸಾಕ್ಷಿಯಾಗಿತ್ತು. ಈ ವರ್ಷದ ಮತ್ತೊಂದು ವಿಶೇಷವೆಂದರೆ ಬೆಂಗಳೂರು ಮೊದಲ ಮಳೆಯ ಸಿಂಚನಕ್ಕೆ ಸಾಕ್ಷಿಯಾಗಿತ್ತು.

ಆಹಾ!! “ಬಲ್ಲವರೇ ಬಲ್ಲ ಬೆಲ್ಲದ ಸವಿಯ” ಎನ್ನುವಹಾಗೆ, ಅಲ್ಲಿ ನೆರೆದಿದ್ದವರಿಗೆ ಮಾತ್ರ ತಿಳಿದಿರುವುದು ಆ ಮಳೆಗೆ ಮೈಯೊಡ್ಡಿ ದೇಶಕ್ಕಾಗಿ ಹುತಾತ್ಮ ಕುಟುಂಬದವರ ಮಾತುಗಳಿಗೆ ಮತ್ತು ಸುನಿತಾರವರ ಇಂಪಾದ ಸ್ವರಕ್ಕೆ ಶೋತ್ರುಗಳಾಗಿ ಆಶೃ ತುಂಬಿದ ಕಣ್ಣಿನಲ್ಲಿ ಭಾರತ ಮಾತೆಗೆ ಜೈಕಾರಕ್ಕೆ ಧ್ವನಿಯಾದ ದಿನವನ್ನು ಮರೆಯಲಂತೂ ಸಾಧ್ಯವೇ ಇಲ್ಲ.

“ಅಮರ್ ರಹೇ ಅಮರ್ ರಹೇ ಸಂದೀಪ್ ಭಯ್ಯಾ ಅಮರ್ ರಹೇ” ಎನ್ನುವ ಘೋಷ ಮಳೆಗೆ ಮೈಯೊಡ್ಡಿಕೊಂಡೇ ನಿಂತಿದ್ದ ನಮ್ಮೆಲ್ಲರ ಚಳಿಯನ್ನು ಬಿಡಿಸಿ ಬಿಟ್ಟಿತ್ತು. ನಂತರದಲ್ಲಿ ಗಣ್ಯ ಮಾತುಗಳಿಗೆ ಕಿವಿಯಾದೆವು.

#ಕ್ಯಾಪ್ಟನ್_ನವೀನ್_ನಾಗಪ್ಪ ಇವರು ನಮಗೆಲ್ಲ ಚಿರ ಪರಿಚಿತರು. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿ ತಮ್ಮ ಕಾಲುಗಳನ್ನು ಕಳೆದುಕೊಂಡು ಈಗಲೂ ಸಂಚಾರ ಮಾಡಿ ಯುವಕರನ್ನು ಪ್ರೇರೇಪಿಸುತ್ತಿರುವ ಸಿಂಹದ ಮರಿ. ಮಾತಾಡ್ತ ಒಂದು ಮಾತು ಹೇಳಿದ್ರು ಈಗಲೂ ಕಿವಿಯಲ್ಲಿ ಗುಯ್ ಗೂಟ್ಟುತ್ತಿದೆ “ಇನ್ನು ಮುಂದೆ ನಾ ಎಲ್ಲಿಯಾದರೂ ನನ್ನನ್ನು ಕರೆಸಿ ಮಾತನಾಡಲು ಹೇಳಿದರೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅಂಥಹವರ ಸಾಹಸ ಗಾಥೆಗಳನ್ನು ಹೇಳುವೆ”

#ಕರ್ನಲ್_ಶರಣ್ ಇವರು ಆರ್ಮಿಯಲ್ಲಿ ಸೇವೆಯನ್ನು ಸಲ್ಲಿಸಿ ನಿವೃತ್ತಿಯ ನಂತರ ಗುಲ್ಬರ್ಗಾದಲ್ಲಿ ಸೇನೆಗೆ ಸೇರುವುದು ಹೇಗೆ ಮತ್ತು ಏಕೆ ಎಂಬುದನ್ನು ಅಲ್ಲಿಯ ಯುವಕರಿಗೆ ತಿಳಿಹೇಳುವ ಕಾಯಕದಲ್ಲಿ ನಿರತರಾಗಿದ್ದಾರೆ. ಅಲ್ಲದೇ, ಆರ್ಮಿಯಲ್ಲಿ ಆಫೀಸರ್ ಹುದ್ದುಗೆ ಏನೆಲ್ಲಾ ಕ್ರಮಗಳು, ಯಾಕೆ ದಕ್ಷಿಣ ಭಾರತದಲ್ಲಿ ಸೇನೆಗೆ ಸೇರುವವರ ಸಂಖ್ಯೆ ಕಡಿಮೆ ಏಕೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಮಳೆಯ ನಡುವೆ ಇಂಪಾದ ದೇಶಭಕ್ತಿ ಗೀತೆಗಳನ್ನು ಮೈಕಿನ ಮತ್ತು ಇತರ ವಾದ್ಯದ ಸಹಾಯವಿಲ್ಲದೇ ಹಾಡಿದ ಹೆಗ್ಗಳಿಕೆ ಸುನಿತಾ ಅವರದ್ದು. ಹಾಡುವುದಕ್ಕೂ ಮೊದಲು ಚಕ್ರವರ್ತಿ ಅಣ್ಣ ಕೇಳಿದ್ರು, ಮೈಕಿಲ್ಲ, ವಾದ್ಯವೃಂದದವರಿಲ್ಲ, ಮಳೆ ಬೇರೇ ಬರ್ತಾ ಉಂಟು, ಅದಕ್ಕೆಲ್ಲಾ ಉತ್ತರವಾಗಿ ಸುನಿತಾ ಅವರು ಹೇಳಿದ್ದು ಒಂದೇ ಮಾತು. ಅಣ್ಣಾ, ಇಂಥಾ ಶೋತ್ರುಗಳಿರುವಾಗ ನನಗಾವುದರ ಚಿಂತೆಯೂ ಇಲ್ಲ ನಾ ಹಾಡಿಯೇ ಹಾಡುತ್ತೇನೆ.

ನಂತರದಲ್ಲಿ ಅಪ್ಪ ಅಮ್ಮ ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿದ ವೀರ ಯೋಧರ ಕುಟುಂಬಗಳಿಗೆ ಸನ್ಮಾನಿಸಿದರು.

ಶ್ರೀ ಜಾವೇದ್ ಅವರ ಕುಟುಂಬ, ಹರಿಹರ

ಶ್ರೀ ಮೇಜರ್ ಅಕ್ಷಯ್ ಅವರ ಕುಟುಂಬ, ಬೆಂಗಳೂರು

ಶ್ರೀ ಚಂದ್ರು ಅವರ ಕುಟುಂಬ, ಶಿಗ್ಗಾವಿ

ಕುಟುಂಬಕ್ಕೇ ಒಬ್ಬನೇ ಆಸರೆಯಾಗಿದ್ದಂತವರನ್ನು ಕಳಕೊಂಡೂ ಸಹ ಹೆಮ್ಮೆಯಿಂದ ಬೀಗಿದವರು ಹುತಾತ್ಮ ಯೋಧರ ಕುಟುಂಬದವರು.

#ಶ್ರೀ_ಚಕ್ರವರ್ತಿ_ಸೂಲಿಬೆಲೆ ಮಾರ್ಗದರ್ಶಕರು, ಯುವಾ ಬ್ರಿಗೇಡ್. ನಮ್ಮೆಲ್ಲರ ಪಾಲಿಗೆ ಪ್ರೀತಿಯ ಅಣ್ಣ, ಸನ್ಮಾನವೆಲ್ಲ ಮುಗಿದ ನಂತರ ಅಣ್ಣ ನಮ್ಮೆಲ್ಲರನ್ನು ಕುರಿತು ಮಾತನಾಡಲು ಶುರು ಮಾಡಿದರು. ಅಷ್ಟರಾಗಲೇ ವರುಣನ ಆರ್ಭಟ ನಿಂತು ಹೋಗಿತ್ತು. ಅಣ್ಣ ಮಾತಾಡ್ತಾ ಹೇಳಿದ್ರು, ನಮ್ಮನ್ನು ಪರೀಕ್ಷೆ ಮಾಡಲೆಂದೇ ಏನೋ ವರ್ಷಧಾರೆ ಆಯ್ತು, ನಮ್ಮೆಲ್ಲರ ಆಶ್ರುವನ್ನು ತೋರ್ಪಡಿಸಲು ಅವಕಾಶ ಕೊಡಲಿಲ್ಲ. ದೇಶಕ್ಕಾಗಿ ಹೋರಾಡುವ ಯೋಧರ ಕುಟುಂಬಕ್ಕೆ ಯುವಾ ಬ್ರಿಗೇಡ್ ಯಾವಾಗಲೂ ಸಹಕಾರ ಕೊಟ್ಟೇ ಕೊಡುತ್ತದೆ.

ಸೋದರಿ ನಿವೇದಿತಾ ಪ್ರತಿಷ್ಠಾನದ ಸಹೋದರಿಯರಿಂದ #ವಂದೇ_ಮಾತರಂ ಗೀತೆಯ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು

ಈ ಬಾರಿಯ ವಿಶೇಷವೆಂದರೆ ಅಮ್ಮ (ಸಂದೀಪರ ತಾಯಿ) ಮಗನನ್ನು ನೆನೆಸಿ ಅಳಲಿಲ್ಲ, ಬದಲಿಗೆ ಹೇಳಿದ್ದು ಒಂದೇ ಮಾತು, ನೀವೇಲ್ಲರೂ ಇಲ್ಲಿ ಬಂದಿದ್ದೀರಲ್ವಾ ಅದೇ ನನಗೆ ಖುಷಿ ಕೊಟ್ಟಿದೆ.

#ಅಮರ್_ಹೇ_ಸಂದೀಪ್_ಭಯ್ಯಾ

#ಅಮರ್_ಹೇ_ಅಕ್ಷಯ್_ಭಯ್ಯಾ

#ಅಮರ್_ಹೇ_ಜಾವೀದ್_ಭಯ್ಯಾ

#ಅಮರ್_ಹೇ_ಚಂದ್ರು_ಭಯ್ಯಾ