ಪ್ರತೀ ಬಾರಿ ಯುವಾಬ್ರಿಗೇಡ್ ಫೆಬ್ರವರಿ 14 ರನ್ನು ದೇಶ ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಈ ಬಾರಿ ಶಿವರಾತ್ರಿಯ ಹಿಂದಿನ ದಿನವೇ ಫೆಬ್ರವರಿ 14. ಹಾಗಾಗಿ ಶಿವನ ವಾಹನ ನಂದಿ/ಗೋವಿಗಾಗಿ ಆ ದಿನವನ್ನು ಮೀಸಲಿಡಲಾಯಿತು.  ಅಂದು ಯುವಾಬ್ರಿಗೇಡ್ ರಾಜ್ಯಾದ್ಯಂತ ‘ಗೋ ಪ್ರೇಮಿ ದಿವಸ್’ ಆಚರಿಸಿತು. ಆಡಳಿತದ ಕುನೀತಿಗೆ ಒಳಗಾಗಿ ಹತ್ಯೆಯಾದ  ಗೋಭಕ್ತರಿಗೆ ಗೌರವ ಮತ್ತು ಗೋಕಳ್ಳರನ್ನು ಪುರಸ್ಕರಿಸುವ ನಾಯಕರಿಗೆ ಪಾಠ ಕಲಿಸಲು ಇದೊಂದು ಪ್ರಯತ್ನವಾಗಿತ್ತು.

ಶಿವರಾತ್ರಿಯ ದಿವಸ ದೇವಾಲಯದ ಮುಂದೆ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ದೇವಾಲಯಕ್ಕೆ ಬರುವ ಭಕ್ತರ ಬಳಿ ಅಭಯಾಕ್ಷರವನ್ನು ಸಂಗ್ರಹಿಸಿದರು. ಕರ್ನಾಟಕದಾದ್ಯಂತ ಈ ಅಭಿಯಾನ ಯಶಸ್ವಿಯಾಗಿ ನೆರವೇರಿತು.