ಅನುಭಾವ ಕವಿ ಶಿಶುನಾಳದ ಶರೀಫಜ್ಜಗೆ ಈ ವರ್ಷ ಭರ್ತಿ ಇನ್ನೂರು. ಆಧ್ಯಾತ್ಮದ ಎತ್ತರದ ತುದಿಯನ್ನು ಮುಟ್ಟಿ ಜಾಗೃತಿಯ ಸಂದೇಶ ಮುಟ್ಟಿಸುತ್ತಿದ್ದ ಶರೀಫಜ್ಜರ ಜಯಂತಿಯನ್ನು, ಜೊತೆಗೆ ಸಾವಿರಾರು ಜನರಿಗೆ ಸಂಗೀತ ದೀಪವಾಗಿ ನಿಂತ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿಯನ್ನು ಯುವಾಬ್ರಿಗೇಡ್ ‘ಅನುಭಾವ ಸಿಂಧು’ ಹೆಸರಿನಡಿಯಲ್ಲಿ ಕರ್ನಾಟಕದ ಹಲವು ಕಡೆಗಳಲ್ಲಿ ಆಚರಿಸಿತು.

ಕೇವಲ ಸಾರ್ವಜನಕ ಕಾರ್ಯಕ್ರಮ ಮಾತ್ರವಲ್ಲದೇ ಇವರಿಬ್ಬರ ಸಂದೇಶವನ್ನು ದರ್ಗಾಗಳಲ್ಲಿಯೂ ಆಚರಿಸುತ್ತಾ‌ ಎಲ್ಲರ ಮನ ತಲುಪುವಂತಾಯಿತು.