ಯುವಾ ಬ್ರಿಗೇಡನ್ನು ಬರಿಯ ಭಾಷಣವೆನ್ನುತ್ತಿದ್ದವರು ಮೂಗಿನ ತುದಿಯಲ್ಲಿ ಕೈ ಹಿಡಿದು ಯುವಾ ಬ್ರಿಗೇಡ್ ಎಂದರೆ ಕೆಲಸ ಕೆಲಸ ಕೆಲಸ ಮಾತ್ರ ಎನ್ನುವುದ್ನ್ನು ಕೇಳಿದಾಗ ಯುವಾ ಬ್ರಿಗೇಡಿನಲ್ಲಿ ಕೆಲಸ ಮಾಡುವ ಸಾವಿರಾರು ತರುಣರು ಸ್ಫೂರ್ತಿ ಪಡೆದು ಇನ್ನಷ್ಟು ಕೆಲಸಗಳನ್ನು ಮಾಡುವಂತಾಗಿದೆ ನಿಮ್ಮ ಹಾರೈಕೆ ಅಭಿನಂದನೆ ಸದಾ ಹೀಗೆ ಇರಲಿ ನಾವು ಮತ್ತಷ್ಟು ಕೆಲಸ ಮಾಡುತ್ತೇವೆ ಮಾಡಿಯೇ ತಿರುತ್ತೇವೆ.

ಕಾಸರಗೋಡಿನ ಕುಂಬಳೆ ಸೀಮೆಯ ದೇವಸ್ಥಾನಗಳಲ್ಲಿ ಒಂದಾದ ಕಣಿಪುರ ಗೋಪಾಲಕೃಷ್ಣ ದೇವಾಲಯ ಕಲ್ಯಾಣಿಯನ್ನು ಸ್ವಚ್ಛ ಮಾಡುವ ಉದ್ದೇಶವಿಟ್ಟುಕೊಂಡು ಯುವಾಬ್ರಿಗೇಡಿನ ಕಾರ್ಯಕರ್ತರು ಹೋದಾಗ ಅಲ್ಲಿಯ ದೇವಸ್ಥಾನದ ಆಡಳಿತ ಮಂಡಳಿಯ ಹಿರಿಯರೊಬ್ಬರು ನರೇಂದ್ರ ಮೋದಿಜಿಯಿಂದಾಗಿ ಇಡೀ ದೇಶದಲ್ಲಿ ಸ್ವಚ್ಛತಾ ಆಂದೋಲನ ಹೇಗಾಯಿತೋ ಹಾಗೆಯೇ ಕರ್ನಾಟಕದಲ್ಲಿ ಸ್ವಚ್ಚತೆ ಕಲ್ಯಾಣಿ ಸ್ವಚ್ಛತೆ ಎಂದಾಗ ಮೊದಲು ನೆನಪಾಗುವುದೇ ಯುವಬ್ರಿಗೇಡ್ ಎಂದಾಗ ನಾನೊಬ್ಬ ಯುವಾ ಬ್ರಿಗೇಡಿಯರ್ ಎಂದು ಹೆಮ್ಮೆ ಪಟ್ಟುಕೊಳ್ಳುವಂತಾಯಿತು.

ಕಟೀಲು ನಂದಿನಿ ನದಿಯನ್ನು ಸ್ವಚ್ಛ ಮಾಡುವಾಗ ನಮ್ಮ ಎಲ್ಲಾ ಕೆಲಸಗಳನ್ನು ದೂರದಿಂದ ನಿಂತು ಕೊನೆಯವರೆಗೆ ವೀಕ್ಷಿಸಿದ ಯುವಾ ಮೋರ್ಚಾ ಅಧ್ಯಕ್ಷರಾದ ಅಭಿಲಾಷ್ ಶೆಟ್ಟಿಯವರು ಯುವಾಬ್ರಿಗೇಡ್ ಎಂದರೆ ಏನೋ ಅಂದುಕೊಂಡಿದ್ದೆ. ಆದರೆ ನೀವು ಮಾಡುವ ಕೆಲಸಗಳನ್ನು ನೋಡಿ ಆಶ್ಚರ್ಯ ಆಯಿತು. ನೀವು ಈ ನದಿಯನ್ನು ಸ್ವಚ್ಛ ಮಾಡಲು ಟೆಂಡರ್ ತಗೊಂಡಂತೆ ಮಾಡ್ತಾ ಇದ್ದಿರಲ್ಲ ಎಂದಾಗ ಇಡೀ ನಮ್ಮ ಯುವಾ ಬ್ರಿಗೇಡ್ ತಂಡವೇ ಹಾಗೆ. ನಾವು ಮಾಡಬೇಕೆಂದು ಹೊರಟ ಕೆಲಸವನ್ನು ಹೀಗೆ ಮಾಡುತ್ತೇವೆ ಎಂದಿದ್ದೆ .ಹೀಗೆ ಒಂದಲ್ಲಾ ಎರಡಲ್ಲಾ ಹತ್ತಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.

655eae8e-fc4c-482c-812d-69b99af63d10

ಇತ್ತೀಚೆಗೆ ಕೆಲವು ತಿಂಗಳಿನಿಂದ ಯುವಾಬ್ರಿಗೇಡಿನಿಂದಾದ ಕೆಲಸಗಳನ್ನು ಅವಲೋಕಿಸಿದಾಗ ಬಹಳ ಅದ್ಬುತ ಎನ್ನಿಸುತ್ತದೆ ಯುವ ಜನತೆಯನ್ನು ದೇಶದ ಕೆಲಸಕ್ಕೆ ಬಳಸಿಕೊಳ್ಳದೆ ನಮ್ಮ ಸಮಾಜವನ್ನು ದೂರುವ ಹಕ್ಕು ನಮಗಿಲ್ಲ ಎನ್ನುವುದನ್ನು ಯುವಾಬ್ರಿಗೇಡ್ ಇಡೀ ಕರ್ನಾಟಕಕ್ಕೇ ತೋರಿಸಿಕೊಡುತ್ತಿದೆ.

021afb41-007e-4f5b-b3c7-d84b42c09ebe

08616477-1376-4611-9db9-8fb9048b4add

efb2ceb6-676d-4841-9922-4e0fe1ff78fc

ಇತ್ತೀಚೆಗಂತೂ ಸ್ವಚ್ಛ ಮಾಡುವುದನ್ನೇ ಕಾಯಕ ಮಾಡಿಕೊಂಡಂತೆ ಅಲ್ಲಲ್ಲಿ ನಡೆಯುವ ಚಿಕ್ಕ ಪುಟ್ಟ ಹಾಗು ದೊಡ್ಡ ಮಟ್ಟದ ಕಾರ್ಯಗಳು ಇಡೀ ರಾಜ್ಯವೇ ಯುವಾ ಬ್ರಿಗೇಡನ್ನು ಸೂಕ್ಷ್ಮವಾಗಿ ಗಮನಿಸಿ ಸರ್ಟಿಫಿಕೇಟ್ ಕೊಡಲು ಪ್ರಾರಂಭಿಸಿದೆ. ಇದರ ಸಂಪೂರ್ಣ ಕ್ರೆಡಿಟ್ ಶ್ರೀಯುತ ಚಕ್ರವರ್ತಿಯವರು ಮತ್ತು ಯುವಾಬ್ರಿಗೇಡಿಗೆ ಸಲ್ಲುತ್ತದೆ. ಅಭಿಮಾನದಿಂದ ನಾನೊಬ್ಬ ದೇಶದ ಕೆಲಸಗಾರ ಎಂದು ಹೆಮ್ಮೆಯಿಂದ ಹೇಳುವಂತಹ ಅವಕಾಶ ದೊರಕಿಸಿದ ಯುವಾ ಬ್ರಿಗೇಡಿಗೆ ಧನ್ಯವಾದಗಳು.