ಚಿಕಾಗೋ ಸರ್ವಧರ್ಮ ಸಮ್ಮೇಳನ ಎಂದೊಡನೆ ನೆನಪಾಗೋದು ನಿಸ್ಸಂಶಯವಾಗಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರೇ. ಇದೆ ಸಮ್ಮೇಳನದಲ್ಲಿಯೇ ಸ್ವಾಮೀಜಿ ಸನಾತನ ಧರ್ಮವನ್ನ ಜಗತ್ತಿನ ಮುಂದೆ ಎತ್ತಿ ಹಿಡಿದಿದ್ದು.

ಸರ್ವಧರ್ಮ ಸಮ್ಮೇಳನಕ್ಕೆ ಹೊರಡುವ ಮೊದಲೇ ಆ ಸಮ್ಮೇಳನ ತನಗಾಗೇ ಆಗುತ್ತಿರುವುದೆಂದಿದ್ದರು ಸ್ವಾಮೀಜಿ. ಆದರೆ ತ್ಯಾಗ ಭೂಮಿಯಿಂದ ಭೋಗ ಭೂಮಿಗೆ ಸಾಗಿದ ಸ್ವಾಮೀಜಿಗೆ ಸಮ್ಮೇಳನದಲ್ಲಿ ಜಯಭೇರಿ ಬಾರಿಸುವ ಮೊದಲು ಎದುರಾದ ಕಷ್ಟಗಳು ಹಲವು ! ಅಲ್ಲಿನ ಹವಾಗುಣ, ದುಬಾರಿ ಜೀವನ, ಸ್ವಾಮೀಜಿಯ ವೇಷಭೂಷಣಗಳ ಮೇಲಿನ ಟೀಕೆ ಹೀಗೆ ಎಲ್ಲ ಕಷ್ಟಗಳನ್ನ ದಾಟಿ ಸ್ವಾಮೀಜಿ ವೇದಿಕೆಯನ್ನೇರಿದರು. ಯಾವ ಆಂಗ್ಲರು ನಮ್ಮನ್ನ ತುಚ್ಛವಾಗಿ ಕಾಣುತಿದ್ದರೋ ಅವರೇ ತಮ್ಮ ಪಾದಗಳಿಗೆ ಎರಗುವಂತೆ ಮಾಡಿದ್ದರು ಸ್ವಾಮಿ ವಿವೇಕಾನಂದರು. ಅಂದು ಹಿಂದೂ ಧರ್ಮದ ಪ್ರತಿನಿಧಿಯಾಗಿ ದಿಗ್ವಿಜಯವನ್ನು ಸ್ಥಾಪಿಸಿದ್ದರು. ಸಮ್ಮೇಳನದ ವೇದಿಕೆಯ ಮೇಲೆ ನಿಂತು ನೀಡಿದ ಕೇವಲ ಮೂರುವರೆ ನಿಮಿಷದ ಭಾಷಣದಿಂದ ಇಡಿಯ ಅಮೇರಿಕ ಪ್ರಭಾವಕ್ಕೊಳಗಾಗಿ ಮುಂದಿನ ಮೂರು ವರ್ಷಗಳು ಅಮೆರಿಕವನ್ನು ಬಿಟ್ಟು ಹೋಗದಂತೆ ಮಾಡಿತು.

download

ಯಾವ ಭಾಷಣ ವಿವೇಕಾನಂದರನ್ನ ಜಗದ್ವಿಖ್ಯಾತವನ್ನಾಗಿ ಮಾಡಿತೋ, ಯಾವ ಭಾಷಣ ಭಾರತಕ್ಕೆ ಹೊಸ ನೆಲಗಟ್ಟನ್ನು ಪರಿಚಯಿಸಿತೋ ಆ ಭಾಷಣಕ್ಕೆ 125 ವರ್ಷಗಳು ಸಂದಿದೆ. ವಿವೇಕಾನಂದರ ಆ ಸಿಂಹಸದೃಶ ವಾಣಿಯನ್ನ ಮತ್ತೆ ಮತ್ತೆ ಮೆಲುಕು ಹಾಕುವ ಮೂಲಕ ಮತ್ತೆ ದಿಗ್ವಿಜವನ್ನ ಕುಂದಾಪುರ ಮತ್ತು ಬೆಂಗಳೂರಿನಲ್ಲಿ ಆಚರಿಸಲಾಯಿತು.

ಕುಂದಾಪುರದಲ್ಲಿ ನಡೆದ ಮತ್ತೆ ದಿಗ್ವಿಜಯ ಕಾರ್ಯಕ್ರಮವು ಶೋಭಾಯಾತ್ರೆಯೊಂದಿಗೆ ಆರಂಭಗೊಂಡಿತು. ಶೋಭಾಯಾತ್ರೆಯನ್ನ ಸುಕುಮಾರ್ ಶೆಟ್ಟಿಯವರು ಉದ್ಘಾಟಿಸಿದರು. ನಂತರ ಅದ್ದೂರಿಯಾದ ಶೋಭಾಯಾತ್ರೆಯನ್ನ ಮುಗಿಸಿ ಸಭಾಕಾರ್ಯಕ್ರಮದ ಉದ್ಘಾಟನೆಗೆ ವೇದಿಕೆ ಸಜ್ಜುಗೊಂಡಿತು. ಸಭಾಕಾರ್ಯಕ್ರಮದ ಉದ್ಘಾಟನೆಯನ್ನ ಮಂಗಳೂರಿನ ರಾಮಕೃಷ್ಣ ಆಶ್ರಮದ ಶ್ರೀ ಧರ್ಮವೃತಾನಂದ ಸ್ವಾಮೀಜಿ ಹಾಗು ಅವರ ಜೊತೆ ಸುಬ್ರಮಣ್ಯ ಹೊಳ್ಳ, ವಿಭಾಗ ಕಾರ್ಯಕಾರಿಣಿಯ ಸದಸ್ಯರು ರಾಷ್ಟೀಯ ಸ್ವಯಂಸೇವಕ ಸಂಘ, ಕುಂದಾಪುರದ ಬಿ ಬಿ ಹೆಗ್ಡೆ ಕಾಲೇಜಿನ ಪ್ರೊಫೆಸರ್ ದೂಮ ಚಂದ್ರಶೇಖರ್ ಮತ್ತು ಯುವಾಬ್ರಿಗೇಡ್ ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ಉರಿಯುತ್ತಿರುವ ದೀಪಕ್ಕೆ ತೈಲ ಎರೆಯುವುದರ ಮೂಲಕ ನಡೆಸಿಕೊಟ್ಟರು.
ನಂತರ ಚಿಕಾಗೋ ಯಾತ್ರೆಯ ಕುರಿತು ಸ್ವಾಸ್ಥ್ಯ ಹೆಲ್ತ್ ಕೇರ್ ಡಿವೈನ್ ಪಾರ್ಕ್ ನ ವಿವೇಕ್ ಉಡುಪ ಅವರು ವಿಷಯ ಮಂಡಿಸಿದರು.
ಎರಡನೆಯ ವಿಷಯವಾದ ಚಿಕಾಗೋ ಯಾತ್ರೆಯ ಕುರಿತು ಯುವಾ ಬ್ರಿಗೇಡಿನ ಸಹ ಸಂಚಾಲಕರಾದ ಸಂತೋಷ್ ಸಮ್ರಾಟ್ ವಿಚಾರವನ್ನ ಮಂಡಿಸಿದರು. ಕೊನೆಯಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಮತ್ತೆ ದಿಗ್ವಿಜಯದ ಒಟ್ಟಾರೆ ಕಲ್ಪನೆಯನ್ನ ಬಿಚ್ಚಿಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.

1

ಬೆಂಗಳೂರಿನ ಕಾರ್ಯಕ್ರಮವನ್ನ ಗಿರಿನಗರದಲ್ಲಿರುವ ರಾಮಕೃಷ್ಣ ಸೇವಾ ಟ್ರಸ್ಟ್ ಅಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನ ಸಂತೋಷ್ ಗುರೂಜಿಯವರು ಉದ್ಘಾಟಿಸಿದರು. ಹಾಗು ಚಕ್ರವರ್ತಿ ಸೂಲಿಬೆಲೆಯವರು ಉಪಸ್ಥಿತರಿದ್ದರು.

25791058_1905917316088332_7407545374232019663_o

ಮೊದಲ ಗೋಷ್ಠಿಯಾದ : ವೇದಾಂತಾ ಮತ್ತು ವಿಜ್ಞಾನವನ್ನ ಭಾರತ ಸರ್ಕಾರದ ವೈಜ್ಞಾನಿಕ ಸಲಹೆಗಾರರು ಮತ್ತು ಇಸ್ರೋದ ಮಾಜಿ ನಿರ್ದೇಶಕರು ಆಗಿರುವ ಟಿ ಜಿ ಕೆ ಮೂರ್ತಿಯವರು ವಿಷಯ ಮಂಡಿಸಿದರು.

25734376_1905920386088025_2381287936516962717_o

ಎರಡೆನೆಯ ಗೋಷ್ಠಿ : ವಿಶ್ವವಿಜೇತ ವಿವೇಕಾನಂದ ಕುರಿತು ವಿಜಯ ಲಕ್ಷ್ಮಿ ಬಾಳೇಕುಂದ್ರಿ ಪ್ರಾದ್ಯಾಪಕರು, ಮಕ್ಕಳ ಹೃದ್ರೋಗ, ವಿಕ್ಟೊರಿಯಾ ಆಸ್ಪತ್ರೆ ಇವರು ಸುಧೀರ್ಘವಾದ ಉಪನ್ಯಾಸವನ್ನ ನೀಡುವುದರ ಮೂಲಕ ಬಿಡಿಸಿಟ್ಟರು.

26063550_1905913316088732_4649071530406231669_o

ಮೂರನೆಯ ಗೋಷ್ಠಿಯಾದ ಮತ್ತೊಮ್ಮೆ ದಿಗ್ವಿಜಯದ ಕುರಿತು ಯುವಾ ಬ್ರಿಗೇಡಿನ ಮಾರ್ಗದರ್ಶಕರು ತಿಳಿಸುವುದರ ಮೂಲಕ ಕಾರ್ಯಕ್ರಮವು ಸಮಾಪ್ತಿಗೊಂಡಿತು.

26023914_1905915359421861_7730190063103749621_o