ಕೋನೇರಿ ಕಲ್ಯಾಣಿ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ಪುಷ್ಕರಣಿಯಾಗಿದ್ದು, ಕ್ರಿ.ಶ ೧೧೧೭ ರಲ್ಲಿ ಹೊಯ್ಸಳ ಅರಸ ವಿಷ್ಣುವರ್ಧನನು ಈ ದೇವಸ್ಥಾನ ನಿರ್ಮಿಸಿದನು. ಗದುಗಿನ ಇತಿಹಾಸ ವರ್ಣಿಸುವ ಪುರಾಣ-ಪುಸ್ತಕಗಳು ಹೇಳುವಂತೆ ಈಗಿನ ಕೊನೇರಿ ಕಲ್ಯಾಣಿಯು ಕೂಡ ಅದೇ ಕಾಲದಲ್ಲಿ ನಿರ್ಮಿತವಾಯಿತು. ಇಲ್ಲಿನ ಆಚಾರ್ಯರ ಅಂಬೋಣವು ಅದೇ ಆಗಿದೆ. ಒಂದು ಐತಿಹ್ಯದ ಪ್ರಕಾರ ಮಹಾಕವಿ ಕುಮಾರವ್ಯಾಸನು ಸಹ ಇದೇ ಕೊನೇರಿ ಕಲ್ಯಾಣಿಯಲ್ಲಿ ಸ್ನಾನ ಮಾಡಿ ನಾರಾಯಣನ ದರುಶನ ಪಡೆಯುತ್ತಿದ್ದನಂತೆ.

ಕೆಲವು ಪ್ರಯತ್ನಗಳೇ ಹಾಗೇ ಇತಿಹಾಸ ನಿರ್ಮಿಸಲು ಸಜ್ಜಾಗಿಯೇ ನಿಂತಿರುತ್ತವೆ ಅದಕ್ಕೆ ನಿದರ್ಶನವೇ ಕೋನೆರಿ ಕಲ್ಯಾಣಿ.ಈ ಕಲ್ಯಾಣಿಯು ಕಾಲಾನಂತರದಲ್ಲಿ ಜನಸಾಮಾನ್ಯರ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿ ಆಳೆತ್ತರಕ್ಕೂ ಹೆಚ್ಚಿನಡಿಯ ಮಣ್ಣು ತುಂಬಿಕೊಂಡು ಗತಿಸಿ ಹೋಗುವಂತಿತ್ತು. ಯುವಾ ಬ್ರಿಗೇಡ್ ಗದಗಿನ ಯುವಕರ ತಂಡ ಸುಮಾರು 270ಕ್ಕೂ ಅಧಿಕ ದಿನಗಳ ಕಾಲ ೯೫ಕ್ಕೂ ಹೆಚ್ಚಿನ ಟ್ರಾಕ್ಟರ್ ಲೋಡಗಳಷ್ಟು ಕಲ್ಯಾಣಿಯಲ್ಲಿದ್ದ 4-5 ಅಡಿ ಮಣ್ಣನ್ನು ಹೂಳೆತ್ತಿ ಹೊರಗೆ ಹಾಕಿದರು. ಅಲ್ಲಿಂದ ನಡೆದ ಚಮತ್ಕಾರವೇ ಇತಿಹಾಸ. ಇವರ ಈ ಸತ್ಕಾರ್ಯಕ್ಕೆ ಪೂರಕವೆಂಬಂತೆ ಕಲ್ಯಾಣಿಯಲ್ಲಿ ನೀರು ಜಿನುಗಲು ಶುರುವಾಯಿತು. ಈಗ 8 ಅಡಿಗಿಂತಲೂ ಹೆಚ್ಚು ನೀರು ತುಂಬಿ ನಳನಳಿಸುತ್ತಿದೆ.

17457960_1140430596079908_8917927360354474400_n 17499152_1141121266010841_7121248015889224493_n 18814243_1202218119901155_5966942369724181892_n

ಬರೋಬ್ಬರಿ ೮ ಶತಮಾನಗಳ ದೀರ್ಘ ಇತಿಹಾಸ ಹೊಂದಿರುವ ಪುರಾತನ ಕೋನೆರಿ ಕಲ್ಯಾಣಿ ತನ್ನ ಆದಿ ಕಾಲದಿಂದ ನಾಲ್ಕಾರೂ ಶತಮಾನಗಳಲ್ಲಿ ಪ್ರತಿ ವರ್ಷವು ದೀಪೋತ್ಸವ, ತೆಪ್ಪೋತ್ಸವ ಆಚರಿಸಿಕೊಂಡು ವಿಜೃಂಭಿಸುತ್ತಿತ್ತು.ಅದೇ ಗತ ವೈಭವವನ್ನು ಪುನರ್ ಸೃಷ್ಟಿಸಲು ನಿರ್ಧರಿಸಿದ ಗದಗಿನ ಯುವಾ ಬ್ರಿಗೇಡ್ ತಂಡ ಇದೇ ಜನೆವರಿ ೧೮ ರಂದು ಭರ್ಜರಿ ದೀಪೋತ್ಸವಕ್ಕೆ ತಯಾರಿ ನಡೆಸಿ ಇಡಿಯ ಗದಗ ಇತಿಹಾಸ ಪುಟದಲ್ಲಿ ಮತ್ತೊಂದು ನಗೆ ಬೀರುವಂತೆ ಮಾಡಿತು.
ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಯುವಾ ಬ್ರಿಗೇಡ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅಣ್ಣ ಮತ್ತು ಅತಿಥಿಗಳಾಗಿ ಡಾ.ಕುಶಾಲ ಗೋಡಖಿಂಡಿಯವರು. ಯುವಾ ಬ್ರಿಗೇಡ್ ಮಹಾರಕ್ಷಕ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಕಿರಣ ಪಾಟೀಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪಗಳ ಸೀರೆ ಉಟ್ಟು ಸುತ್ತ ಹೂವುಗಳಿಂದ ಅಲಂಕೃತವಾಗಿದ್ದ ಕಲ್ಯಾಣಿ ನೋಡಲು ಮಧುಮಗಳಂತೆ ಕಾಣುತ್ತಿದ್ದಳು.
26903778_1546250035410536_9054417983891510762_n

20374239_1546249725410567_5993540944185220960_n

ಕಲ್ಯಾಣಿಯ ನಡುವೆ ಇರುವ ಮಂಟಪದ ವೇದಿಕೆಯಲ್ಲಿ ನಿಂತು ಚಕ್ರವರ್ತಿ ಅಣ್ಣ ಇಡಿಯ ಕಾರ್ಯಕ್ರಮದ ಪೂರ್ಣ ವಿವರ ನೀಡಿ ೮ ಶತಮಾನಗಳ ದೀರ್ಘ ಕಾಲದ ಇತಿಹಾಸವುಳ್ಳ ಕಲ್ಯಾಣಿಯನ್ನು ೨೭೦ಕ್ಕೂ ಅಧಿಕ ದಿನಗಳ ಕಾಲ ಹೇಗೆ ಯುವ ಮನಸ್ಸುಗಳು ಶ್ರಮದ ಮೂಲಕ ಪುನಶ್ಚೇತನಗೊಳಿಸಿ ಪರಂಪರೆಯನ್ನು ಮರಳಿಸಿದ್ದಾರೆ.

27173470_1546249458743927_2593545189104293160_o

ನೀರಿಗಾಗಿ ನೂರಾರು ದಿನ ಹೋರಾಟ ಮಾಡುವವರ ನಡುವೆ ಇದ್ದುಕೊಂಡೆ ನೂರಾರು ದಿನಗಳ ಕಾಲ ನೀರಿಗಾಗಿ ಶ್ರಮವಹಿಸಿ ಕೆಲಸ ಮಾಡಿ ಪ್ರತಿಫಲವೆಂಬಂತೆ ಬತ್ತಿ ಹೋಗಿದ್ದ ಕಲ್ಯಾಣಿಯಲ್ಲಿ ನೀರು ಜಿನುಗುವಂತೆ ಮಾಡಿದ್ದಾರೆ. ಈ ಗದಗಿನ ಯುವಕರು ಮರುನಿರ್ಮಿಸಿದ ಈ ಪರಂಪರೆಯು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ.  ಆದ್ದರಿಂದ ಈ ಕೋನೆರಿ ಕಲ್ಯಾಣಿ ರಕ್ಷಣೆಯೇ ನಮ್ಮ ಕರ್ತವ್ಯವಾಗಲಿ ಎಂದು ಹೇಳಿ ಈ ಯುವಕರ ರಾಷ್ಟ್ರ ಕಾರ್ಯದ ಪ್ರಜ್ಞಾವಂತಿಕೆ ಎಲ್ಲರಿಗೂ ಬಂದಾಗಲೇ ಭಾರತ ವಿಶ್ವಗುರುವಾಗುತ್ತದೆ ಎಂದರು.